ಪುಷ್ಪಕ ವಿಮಾನ ೨೦೧೭ರ ಕನ್ನಡ ಭಾಷೆಯ, ರವೀಂದ್ರನಾಥ ನಿರ್ದೇಶನದ ಚೊಚ್ಚಲ ಚಿತ್ರ. ಈ ಚಿತ್ರವು ರಮೇಶ್ ಅರವಿಂದ್ ರವರು ನಟಿಸಿರುವ ೧೦೦ನೇ ಚಿತ್ರ, ಇವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮತ್ತು ಬೇಬಿ ಯುವೀನ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.೧೮ ವರ್ಷಗಳ ನಂತರ ಜೂಹಿ ಚಾವ್ಲಾ ರವರು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ೧೯೮೭ರ ಕಮಲ್ ಹಾಸನ್ ನಟಿಸಿರುವ ಮೂಕಿ ಚಿತ್ರ " ಪುಷ್ಪಕ ವಿಮಾನ" ದಿಂದ ಪ್ರೇರಿತವಾಗಿದೆ. == ==